ವರ್ಷಧಾರೆ – 2019

ಕರ್ನಾಟಕ ರಾಜ್ಯದಲ್ಲಿ ಮಳೆಗಾಗಿ ಮೋಡಬಿತ್ತನೆ ಕಾರ್ಯಕ್ರಮ

ಭಾರತದಲ್ಲಿ ಕರ್ನಾಟಕ ರಾಜ್ಯವು 2ನೇ ಶುಷ್ಕ ಹೊಂದಿರುವಂತಹ ರಾಜ್ಯವಾಗಿರುತ್ತದೆ. ಕಳೆದ 18 ವರ್ಷಗಳಲ್ಲಿ 14 ವರ್ಷಗಳ ಬರದ ವಿವಿಧ ಸ್ಥರಗಳನ್ನು / ಏರಿಳಿತಗಳನ್ನು ಅನುಭವಿಸಿರುತ್ತದೆ. 2017-18 ನೇ ಸಾಲಿನಲ್ಲಿ ರಾಜ್ಯದಲ್ಲಿ ಮಳೆಗಾಗಿ ಮೋಡ ಬಿತ್ತನೆ ಕಾರ್ಯ ಕೈಗೊಳ್ಳಲಾಗಿತ್ತು. ಐಐಟಿಎಂ ವಿಜ್ಞಾನಿಗಳಾದ ಡಾ.ಜೆ.ಆರ್.ಕುಲಕರ್ಣಿ, ಡಾ.ಸವಿತಾ ಮೊರ್ವಾಲ್, ಡಾ.ಎನ್.ಆರ್.ದೇಶಪಾಂಡೆ ಯವರು ಈ ಯೋಜನೆಯನ್ನು ಅವಲೋಕಿಸಿ ವೈಜ್ಞಾನಿಕ ಪ್ರಬಂಧವನ್ನು ಪ್ರಕಟಿಸಿದ್ದಾರೆ. ಇದರ ಪ್ರಕಾರ 27.9% ರಷ್ಟು ಮಳೆಯಲ್ಲಿ ಹೆಚ್ಚಳವಾಗಿದೆ ಹಾಗು 2.1 ಟಿಎಂಸಿ ನೀರಿನ ಹೆಚ್ಚಳವಾಗಿದೆಯೆಂದು ವರದಿಮಾಡಿರುತ್ತಾರೆ.

2018-19 ನೇ ಸಾಲಿನಲ್ಲಿ ರಾಜ್ಯದ ಒಟ್ಟು 176 ತಾಲ್ಲೂಕುಗಳಲ್ಲಿ ಈಗಾಗಲೇ 162 ತಾಲ್ಲೂಕುಗಳು ಬರಪೀಡಿತವೆಂದು ಘೋಷಿತವಾಗಿದೆ. ಕಳೆದ ಸಾಲಿನಲ್ಲಿ ಸ್ವಲ್ಪ ಮಟ್ಟಿನ ಮಳೆಯಾಗಿದ್ದರೂ ಸಹ ಬಹುಪಾಲು ತಾಲ್ಲೂಕುಗಳ ಹಲವು ಪ್ರದೇಶಗಳಲ್ಲಿ ವಾಡಿಕೆಗಿಂತ ಕಡಿಮ ಮಳೆಯಾಗಿರುವುದನ್ನು ಸ್ಮರಿಸಬಹುದು. ರಾಜ್ಯದಲ್ಲಿ ಆವರಿಸಿರುವ ಬರದ ಛಾಯೆಯಿಂದ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಲಭ್ಯತೆ ಕಡಿಮೆಯಾಗಿದೆ ಮತ್ತು ವ್ಯವಸಾಯ ಚಟುವಟಿಕೆಗಳಿಗೂ ತೊಂದರೆಯಾಗಿರುವುದು ತಿಳಿದ ವಿಷಯವಾಗಿರುತ್ತದೆ. ಈ ಮೇಲಿನ ಅಂಶಗಳನ್ನು ಆಧಾರಿಸಿ ತುರ್ತಾಗಿ ಮೋಡ ಬಿತ್ತನೆ ಕಾರ್ಯಕ್ರಮದ ಪ್ರಕ್ರಿಯೇ ಪ್ರಾರಂಭ ಮಾಡಬೇಕಾಗಿರುವ ಪ್ರಯುಕ್ತ ಟೆಂಡರ್ ಪ್ರಕ್ರಿಯೆ ಮುಕ್ತಾಯಗೊಳಿಸಿ ಸಚಿವ ಸಂಪುಟದ ಅನುಮತಿ ಪಡೆಯಲಾಗಿರುತ್ತದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಮೋಡ ಬಿತ್ತನೆ ಕಾರ್ಯಕ್ರಮದ ನಿರ್ವಹಣೆಯನ್ನು ವಹಿಸಲಾಗಿದೆ.

ಮೋಡಬಿತ್ತನೆಗಾಗಿ ಯಾದಗಿರಿ ಜಿಲ್ಲೆ ಸುರಪುರ, ಗದಗ ಹಾಗೂ ಬೆಂಗಳೂರಿನಲ್ಲಿ 3-ರೆಡಾರ್ ಗಳನ್ನು ಸ್ಥಾಪಿಸಲಾಗುತ್ತಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣ ಮತ್ತು ಬೆಂಗಳೂರು ಎಚ್.ಎ.ಎಲ್ ವಿಮಾನ ನಿಲ್ದಾಣ ಬಳಸಿಕೊಂಡು 2-ವಿಶೇಷ ವಿಮಾನಗಳಿಂದ ಮೋಡ ಬಿತ್ತನೆ ಕಾರ್ಯಚರಣೆ ಕೈಗೊಳ್ಳಲಾಗುತ್ತದೆ. ಮೋಡ ಬಿತ್ತನೆ ಕಾರ್ಯಕ್ರಮವನ್ನು ಮೆ|| ಖ್ಯಾತಿ ಕ್ಲೈಮೇಟ್ ಮಾಡಿಫ಼ಿಕೇಶನ್ ಕನ್ಸಲ್ಟೆಂಟ್ಸ್, ಬೆಂಗಳೂರು ರವರಿಗೆ ರೂ.45.00 ಕೋಟಿಗಳಿಗೆ ಟೆಂಡರ್ ಮುಖಾಂತರ ವಹಿಸಲಾಗಿದೆ.

ರಾಜ್ಯದಲ್ಲಿ ಪ್ರಸ್ತುತ ಮೋಡ ಬಿತ್ತನೆ ಕಾರ್ಯಚರಣೆಗೆ ಕೈಗೊಳ್ಳುವ ಪುರ್ವದಲ್ಲಿ ಕರ್ನಾಟಕ ಸರ್ಕಾರ, ರಾಜ್ಯ ಮಟ್ಟದಲ್ಲಿ 2-ಉನ್ನತ ಸಮಿತಿಗಳನ್ನು ರಚಿಸಿದ್ದು ಅಭಿವೃದ್ಧಿ ಆಯುಕ್ತರು ಹಾಗೂ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಮೇಲ್ವಿಚಾರಣ ಸಮಿತಿ ಹಾಗೂ ಅಂತರ್ ರಾಜ್ಯ ಮಟ್ಟದ ಪ್ರೋ. ಜಿ.ಎಸ್ ಭಟ್ IIS, ಬೆಂಗಳೂರು ಇವರ ಅಧ್ಯಕ್ಷತೆಯಲ್ಲಿ ತಾಂತ್ರಿಕ ತಜ್ಞರ ಸಮಿತಿಯನ್ನು ರಚಿಸಿ, ಈ ತಜ್ಞರ ಸಲಹೆ ಮೇರೆಗೆ ಯೋಜನೆ ಸಿದ್ದಪಡಿಸಲಾಗಿರುತ್ತದೆ.

ರಾಜ್ಯದಲ್ಲಿ ಮಳೆ ಪ್ರಮಾಣವನ್ನು ಅಳೆಯುವ ಮಾಪನಗಳನ್ನು ಕರ್ನಾಟಕ ರಾಜ್ಯದ ನೈಸರ್ಗಿಕ ವಿಕೋಪ ಮೇಲ್ವಿಚಾರಣ ಕೇಂದ್ರವು, ಸ್ಥಾಪಿಸಿರುತ್ತದೆ ಮತ್ತು ಮಳೆ ಮಾಪನಗಳನ್ನು ಆಧುನಿಕ ತಂತ್ರಜ್ಞನ ಆಧಾರಿಸಿ ಮಳೆ ಪ್ರಮಾಣ ಅಳೆಯುವ ಜವಾಬ್ದಾರಿಯನ್ನು ನಿರ್ವಹಿಸುತ್ತಿರುತ್ತದೆ. ನಮ್ಮ ಈ ಕಾರ್ಯಚರಣೆಗೆ ಇದನ್ನು ಬಳಸುವ ಮೂಲಕ ಪ್ರಸುತ್ತ, ಮೋಡಬಿತ್ತನೆ ಕಾರ್ಯಚರಣೆಯ ಮೌಲ್ಯ ಮಾಪನ ವರದಿಯನ್ನು ನಿರ್ವಹಿಸುವಲ್ಲಿ ಉಪಯೋಗಿಸಿಕೊಳ್ಳಲಾಗುತ್ತದೆ.

ಪ್ರಸ್ತುತ ಮೋಡ ಬಿತ್ತನೆ ಕಾರ್ಯಚರಣೆಯನ್ನು ಅನುಷ್ಟಾನಗೊಳಿಸಲು ರಾಜ್ಯ ಮಟ್ಟದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ವಿಷಯ ತಜ್ಞರು ಮತ್ತು ಪರಿಣಿತ ವಿಜ್ಞಾನಿಗಳನ್ನು ಆಧರಿಸಿ ವಿವಿಧ ತಂಡಗಳಾದ Field Observation Team, Radar Calibration Team, Monitoring & Advisory Team and Evaluation Team ಗಳನ್ನು ರಚಿಸುವ ಮೂಲಕ ವೈಜ್ಞಾನಿಕವಾಗಿ ನಿರ್ವಹಿಸಲಾಗುತ್ತಿದೆ.

© All Rights Reserved Varshadhara 2019